ಮತ್ತೊಮ್ಮೆ ಕರಸೇವಕನಾಗಲು ಸಂತೋಷವಾಗುತ್ತಿದೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ


ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ರಾಮನಗರಿಯಿಂದ ತಂದಿರುವ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಣೆ ಅಭಿಯಾನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶಾಸಕ ಗೋಪಾಲಯ್ಯ ಭಾಗವಹಿಸಿದ್ದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಡಾಲರ್ಸ್ ಕಾಲೊನಿಯ ಮನೆಮನೆಗಳಿಗೆ ಅಯೋಧ್ಯೆಯಿಂದ ತಂದ ಪವಿತ್ರ ಮಂತ್ರಾಕ್ಷತೆ ವಿತರಿಸಿದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ: ಧಾರವಾಡದಿಂದ ರೈತರಿಂದ 110 ಇಂಚು ಉದ್ದದ ಎರಡು ಕಂಬಳಿಗಳ ಕಾಣಿಕೆ!

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಜನರಿಗೆ ರಾಮಮಂದಿರ ಮಂತ್ರಾಕ್ಷತೆ ಅರ್ಪಿಸಿದಾಗ ಕರಸೇವಕನಾಗಿದ್ದ ನನ್ನ ಹಳೆಯ ದಿನಗಳು ನೆನಪಾಯಿತು. ಇದೀಗ ಮತ್ತೊಮ್ಮೆ ಕರಸೇವಕನಾಗಿದ್ದು ಸಂತಸ ತಂದಿದೆ ಎಂದು ಹೇಳಿದರು.

ರಾಮರಾಜ್ಯದ ವೈಭವವನ್ನು ಮರಳಿ ತರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲು ನನಗೆ ಯಾವುದೇ ಸಂಕೋಚವಿಲ್ಲ ಎಂದು ಇದೇ ವೇಳೆ ಹೇಳಿದರು. <img src="https://media.kannadaprabha.com/uploads/user/imagelibrary/2024/1/8/w600X390/karsevak-BSY.jpg" alt="ಮತ್ತೊಮ್ಮೆ ಕರಸೇವಕನಾಗಲು ಸಂತೋಷವಾಗುತ್ತಿದೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ" title="ಮತ್ತೊಮ್ಮೆ ಕರಸೇವಕನಾಗಲು ಸಂತೋಷವಾಗುತ್ತಿದೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ"

Source link

Leave a Comment