ಕಟೌಟ್ ಗಳಿಗೆ ಸರ್ಕಾರ ನಿರ್ಬಂಧ ವಿಧಿಸಬೇಕು, ನಟರು ಸಹ ಎಚ್ಚರಿಕೆ ವಹಿಸಬೇಕು: ಆರ್ ಅಶೋಕ್- Kannada Prabha

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಸಂದರ್ಭದಲ್ಲಿ ಕಟೌಟ್ ಕಟ್ಟಲು ಹೋಗಿದ್ದ ಗದಗ ಜಿಲ್ಲೆಯ ಸೂರಣಗಿ ಗ್ರಾಮದ ಮೂವರು ಯುವಕರು ವಿದ್ಯುತ್ ತಂತಿ ತಲುಗಿ ಸಾವಿಗೀಡಾಗಿದ್ದು ಬಹಳ ನೋವಿನ ಸಂಗತಿ. ಇಂತಹ ಘಟನೆಗಳು ಆಗದಂತೆ ಸರ್ಕಾರ ಮತ್ತು ಚಿತ್ರನಟರು ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ನಟರ ಬಗ್ಗೆ ಅಭಿಮಾನ ಇರಬೇಕು, ಆದರೆ ಅದು ಅತಿರೇಕವಾಗಿ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಬಾರದು. ಈ ಬಗ್ಗೆ ನಟರು ಅಭಿಮಾನಿಗಳಿಗೆ ಮೊದಲೇ ತಿಳುವಳಿಕೆ, ಬುದ್ದಿಮಾತು ಹೇಳಬೇಕು. ನಟರ ಕಟೌಟ್ ಗಳನ್ನು ಎಷ್ಟು ಅಡಿ ಎತ್ತರಕ್ಕೆ ಹಾಕಬೇಕು, ಎಷ್ಟು, ಹೇಗೆ ಹಾಕಬೇಕು ಎಂದು ಸರ್ಕಾರ ಕೂಡ ನಿರ್ಬಂಧ ವಿಧಿಸಬೇಕು. ಇಂತಹ ಎಚ್ಚರಿಕೆಗಳನ್ನು ತಂದರೆ ದುರ್ಘಟನೆಗಳನ್ನು ತಪ್ಪಿಸಬಹುದು ಎಂದರು.

ಇದನ್ನೂ ಓದಿ: ನಟ ಯಶ್ ಅಭಿಮಾನಿಗಳ ಸಾವು: ಕಣ್ಣೀರ ಕೋಡಿಯಲ್ಲಿ ಗದಗ ಜಿಲ್ಲೆಯ ಸೂರಣಗಿ ಗ್ರಾಮಸ್ಥರು, ಆಸ್ಪತ್ರೆಗೆ ಶಾಸಕ ಭೇಟಿ, ಪರಿಹಾರದ ಭರವಸೆ

Source link

Leave a Comment